RESPONSIVE LEADERBOARD AD AREA
Film News

ಅದ್ಧೂರಿ ಬಡ್ಜಟ್ ನಲ್ಲಿ ರಣವಿಕ್ರಮ

ಜಯಣ್ಣ ಕಂಬೈನ್ಸ್ ಲಾಂಚನದಲ್ಲಿ, ಗೂಗ್ಲಿ, ಗೋವಿಂದಾಯ ನಮಃ ಚಿತ್ರಗಳ ಯಶಸ್ವಿ ನಿರ್ದೇಶಕರಾದ, ಪವನ್ ಒಡೆಯರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ, 20 ಕೋಟಿಯ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.

ಈ ಮೊದಲು ‘ಧೀರ ರಣವಿಕ್ರಮ’ ಎಂದು ನಾಮಕರಣವಾಗಿದ್ದ ಚಿತ್ರ, ಈಗ (ಧೀರವನ್ನು ಹೊರತುಪಡಿಸಿ) ‘ರಣವಿಕ್ರಮ’ನಾಗಿದ್ದಾನೆ. ಇತ್ತೀಚಿನ ವರದಿಗಳ ಪ್ರಕಾರ ‘ಹೊಂಗನಸು’ ಹಾಗು ತೆಲುಗಿನ ‘ಸೀತಮ್ಮ ವೇಕಿಟ್ಲೊ’, ‘ಬಲುಪು’ ಖ್ಯಾತಿಯ ಅಂಜಲಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಚಿತ್ರದ ಮತ್ತೊಬ್ಬ ನಾಯಕಿ ‘ರಚಿತಾ ರಾಮ್’. ಹಾಗೆಯೇ ಚಿತ್ರದಲ್ಲಿ ಅಪ್ಪುರವರದು ದ್ವಿಪಾತ್ರವಲ್ಲ, ಎರಡು ಶೇಡ್ ಇರುವ ಒಂದೇ ಪಾತ್ರವೆಂದು ನಿರ್ದೇಶಕರು ಖಚಿತಪಡಿಸಿದರು.
ಜೂನ್ ಅಂತ್ಯದಲ್ಲಿ/ಜುಲೈ ಮೊದಲ ವಾರದಲ್ಲಿ ಶುರುವಾಗುತ್ತಿರುವ ಚಿತ್ತ್ರೀಕರಣವನ್ನು, ಈ ವರ್ಷವೇ ಮುಗಿಸಿ ತೆರೆ ಕಾಣಿಸಲು ಸಜ್ಜಾಗಿದೆ ಚಿತ್ರತಂಡ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿರುವ ಚಿತ್ರಕ್ಕೆ ರವಿವರ್ಮರವರ ಸಾಹಸ ನಿರ್ದೇಶನವಿದೆ.

– ಶ್ರೀಕಾಂತ್ .ಆರ್, ನಮ್ ಸಿನಿಮಾ

 

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top