RESPONSIVE LEADERBOARD AD AREA
Film News

''ರನ್ನ'' ನ ಹಾವಳಿಗೆ ಬೆದರಿದ ಬಾಕ್ಸ್ ಆಫೀಸ್ – ಧೂಳ್ ಕಲೆಕ್ಷನ್

”ರನ್ನ” ನ ಹಾವಳಿಗೆ ಬೆದರಿದ ಬಾಕ್ಸ್ ಆಫೀಸ್ :

ಯಾವಾಗ ರಿಲೀಸ್ ಮಾಡ್ತೀರೋ?? ಎಂದು ಕೂಗಿ ಕೂಗಿ ಕೇಳುತ್ತಿದ್ದರು ಕಿಚ್ಹ ಸುದೀಪ್ ಅಭಿಮಾನಿಗಳು, ತಪ್ಪು-ತೊಡಕುಗಳ ಸರಮಾಲೆಯಲ್ಲಿ ಸಿಕ್ಕು ಹುಚ್ಚಾಪಟ್ಟೆ ವಿಳಂಬವಾಗಿತ್ತು ”ರನ್ನ” ಚಿತ್ರದ ಬಿಡುಗಡೆ..ಕಿಚ್ಹನ ಸಿನಿಮಾ ತೆರೆಕಂಡು ಒಂದುವರ್ಷ ಕಳೆದು ಹೋಗಿತ್ತು, ಅಭಿಮಾನಿಗಳು ”ರನ್ನ”ನಿಗಾಗಿ ಬಕಪಕ್ಷಿಯಾಗಿದ್ದು ಸಹಜವಾಗಿಯೇ ಇತ್ತು.
ಎಲ್ಲದಕ್ಕೂ ಒಂದು ಅಂತ್ಯ ಇರುವಂತೆಯೇ, ಕೊನೆಗೂ ಜೂನ್ ನಾಲ್ಕರಂದು ಬಿಡುಗಡೆಯಾದನು ”ರನ್ನ”

ಜೂನ್ ನಾಲ್ಕರ ಶುಕ್ರವಾರದಂದು ಮೊದಲ ಶೋ ನೋಡಿ ಹೊರಬಂದ ಅಭಿನಯ ಚಕ್ರವರ್ತಿ ಕಿಚ್ಹ ಸುದೀಪ್ ಅಭಿಮಾನಿಗಳ ಮುಖದ ಮೇಲೆ ನೆಮ್ಮದಿಯ ನಿಟ್ಟುಸಿರು.. ಲೇಟ್ ಆದರೂ ಲೇಟೆಸ್ಟ್ ಆಗಿ ಬಂದು ಸಖತ್ ಕಿಕ್ ಕೊಟ್ಟಿದ್ದರು ಕಿಚ್ಹ ಸುದೀಪ್.. ”ರನ್ನ” ಅಭಿಮಾನಿಗಳ
ಹೃದಯವನ್ನ ತಟ್ಟಿದ್ದ, ಅಷ್ಟೊಂದು ಹ್ಯಾಂಡ್ ಸಂ ಆಗಿ ಕಿಚ್ಹ ಸುದೀಪ್ ರನ್ನು ತೆರೆಯ ಮೇಲೆ ನೋಡಿ, ಮೈ ಚಳಿ ಬಿಟ್ಟು ಕಿಚ್ಹ ನರ್ತಿಸುವುದನ್ನು ನೋಡಿ, ಕಿಚ್ಹನ ಖಡಕ್ ಬಾಂಬ್
ಬೇಸ್ ವಾಯ್ಸ್ ನಿಂದ ಉದುರುತ್ತಿದ್ದ ಸಖತ್ ಡೈಲಾಗ್ ಗಳನ್ನುಕೇಳಿ ಅಭಿಮಾನಿಗಳು ಸಂತೃಪ್ತರಾದರು..ಅಲ್ಲಿಗೆ ಒಂದು ವಿಷಯ ಖಾತ್ರಿಯಾಗಿ ಹೋಗಿತ್ತು..”ರನ್ನ” ಬಾಕ್ಸ್
ಆಫೀಸ್ ನಲ್ಲಿ ಬೊಂಬಾಟ್ ಕಲೆಕ್ಷನ್ ಮಾಡಲಿರುವುದು ಗ್ಯಾರಂಟಿ ಅಂತ..

ಹಾಗೆಯೇ ಆಯಿತು.. ರಾಜ್ಯಾದ್ಯಂತ ಅನಾಮತ್ತು ೨೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ಮಲ್ಟಿಪ್ಲೆಕ್ಷ್ ಗಳಲ್ಲಿ ಕನ್ನಡ ಸಿನಿಮಾಗಳ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ
ದೊಡ್ಡ ಸಂಖ್ಯೆಯ ಪ್ರದರ್ಶನಗಳು ರನ್ನನ ಅಬ್ಬರಕ್ಕೆ ಸಾಕ್ಷಿಯಾದವು.. ಚಿತ್ರಮಂದಿರಗಳ ಮುಂದೆ ಹೌಸ್ ಫುಲ್ ಬೋರ್ಡ್ ಫಿಕ್ಸ್ ಆಗಿತ್ತು.. ಮಲ್ಟಿಪ್ಲೆಕ್ಸ್ ಗಳಲ್ಲಿ ಜನ
ಕಿಕ್ಕಿರಿದರು.. ನಂಬಲರ್ಹ ಮೂಲಗಳ ಪ್ರಕಾರ ”ರನ್ನ” ತನ್ನ ನಾಲ್ಕು ದಿನಗಳ ವಿಸ್ತಾರವಾದ ವಾರಾಂತ್ಯದಲ್ಲಿ ಗಳಿಸಿದ್ದು ಅನಾಮತ್ತು ಹತ್ತು ಕೋಟಿ..ಇದು ಕನ್ನಡ
ಚಿತ್ರರಂಗಕ್ಕೊಂದು ಹೊಸ ದಾಖಲೆ..

ರನ್ನ ಆರಂಭವನ್ನೇನೋ ಅದ್ಭುತವಾಗಿ ಪಡೆದುಕೊಂಡಿದೆ, ಮುಂಬರುವ ದಿನಗಳಲ್ಲಿ ಆರ್ಭಟ ಹೇಗೆ
ಮುಂದುವರೆಯುತ್ತದೆ ಎನ್ನುವುದರ ಮೇಲೆ ಚಿತ್ರ ಎಷ್ಟು ದೊಡ್ಡ ಮಟ್ಟದ ಯಶಸ್ಸು ಸಾಧಿಸಲಿದೆ ಎನ್ನುವುದು ತಿಳಿಯುತ್ತದೆ.ಅಭಿಮಾನಿಗಳು ಸಿನಿಮಾವನ್ನು ಬೆನ್ನುಬಿದ್ದು
ನೋಡುತ್ತಿರುವುದು ನಿಜವಾದರೂ, ಈ ಸಿನಿಮಾಕ್ಕೆ ಅಸಲು ಬೇಕಾಗಿರುವುದೇ ಹೆಂಗೆಳೆಯರ ಆಶೀರ್ವಾದ, ಹೆಣ್ಣುಮಕ್ಕಳು ಈ ಸಿನಿಮಾ ನೋಡಬೇಕು, ಬೇರೆಯವರಿಗೆ ನೋಡಲು ಹೇಳಬೇಕು, ಮನೆಮಂದಿಯೆಲ್ಲ ಚಿತ್ರಮಂದಿರಕ್ಕೆ ನುಗ್ಗಬೇಕು.. ಆಗ ನೋಡಿ ಅಪಾರವಾದ ಚಿನ್ನ ರನ್ನನಿಗೆ
ಸಿಗುತ್ತದೆ.

ರನ್ನ ಚಿತ್ರದ ನಂತರ ಮತ್ತೆ ಕಿಚ್ಹ ಸುದೀಪ್ ಕ್ರೇಜ್ ತಾರಕಕ್ಕೆ ಏರಿದೆ.. ಕಡಿಮೆ ಸಿನಿಮಾಗಳನ್ನು ಮಾಡುವ.. ಆದರೆ ಹೆಚ್ಚಿನ ಕ್ರೇಜ್ ಹುಟ್ಟಿಸುವ ಕಿಚ್ಹ ಇನ್ನು ಮುಂದೆ ತಮ್ಮ ಅಭಿಮಾನಿಗಳನ್ನು ಕಾಯಿಸದೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚಲಿದ್ದಾರೆ, ಹೆಬ್ಬುಲಿ, ಪ್ರಕಾಶ್ ನಿರ್ದೇಶನದ ಸಿನಿಮಾ ಮತ್ತು ಕೆ ಎಸ್ ರವಿ ಕುಮಾರ್ ನಿರ್ದೇಶನದ ಸಿನಿಮಾಗಳು ಅಭಿನಯ ಚಕ್ರವರ್ತಿಯ ಅಭಿನಯವನ್ನು ಓರೆಗೆ ಹಚ್ಚಲಿರುವ ಮುಂದಿನ ಸಿನಿಮಾಗಳು..

ಕಿಚ್ಹ ಸುದೀಪ್ ಅಭಿಮಾನಿಗಳಿಗೆ ”ರನ್ನ” ಸಿಕ್ಕಿದ್ದಕ್ಕೆ ಅಭಿನಂದನೆಗಳು

RESPONSIVE LEADERBOARD AD AREA
RESPONSIVE LEADERBOARD AD AREA
To Top