RESPONSIVE LEADERBOARD AD AREA
Film News

ಕನ್ನಡದಲ್ಲಿ ತಾವೇ ಸ್ವತಃ ಡಬ್ ಮಾಡಿದ ರಾಹುಲ್ ಬೋಸ್!

ಅದೊಂದು ಕಾಲವಿತ್ತು, ಪರಭಾಷಾ ತಾರೆಯರು ಕನ್ನಡದಲ್ಲಿ ನಟಿಸಿದರೂ ಕನ್ನಡ ಕಲಿತು ತಮ್ಮ ಪಾತ್ರಕ್ಕೆ ಸ್ವತಃ ತಾವೇ ಧ್ವನಿಕೊಡುತ್ತಿದ್ದರು. ಆ ಮೂಲಕ ಕನ್ನಡದವರೇ ಆಗಿ ಹೋಗಿತ್ತಿದ್ದರು. ಆದರೆ ಆ ಸನ್ನಡತೆ ಕ್ರಮೇಣ ಮಾಯವಾಗ ತೊಡಗಿತು. ನಟನೆ ಕೇವಲ ವ್ಯಾಪಾರದ ವಸ್ತುವಾಗಿ ಹೋಯಿತು. ಹೊರ ಭಾಷೆಯವರಿರಲಿ, ಸ್ವತಃ ಕನ್ನಡದ ಕೆಲವು ನಟ ನಟಿಯರೇ ತಮ್ಮ ಪಾತ್ರಕ್ಕೆ ತಾವು ಡಬ್ ಮಾಡದೆ ಬೇರೆಯವರಿಂದ ಮಾಡಿಸ ತೊಡಗಿದರು. ಹಿಂದಿನವರಲ್ಲಿದ್ದ ಶ್ರದ್ಧೆ ಸಂಪೂರ್ಣ ಮಾಯವಾಗಿಹೋಯಿತು. ಈ ಬಗ್ಗೆ ಹಿರಿಯ ನಟಿ ಲಕ್ಷ್ಮಿ ಅವರು ಪದೇ ಪದೇ ಬೇಸರ ವ್ಯಕ್ತ ಪಡಿಸಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದು.

ಆದರೆ ಇದೀಗ ಹಿಂದಿ ಚಿತ್ರರಂಗದಿಂದ ಬಂದ ನಟನೊಬ್ಬ ತಾನು ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರುವ ಪಾತ್ರಕ್ಕೆ ಸ್ವತಃ ತಾನೇ ಡ್ಯಾಬ್ ಮಾಡುವ ಮೂಲಕ ತನ್ನಲ್ಲಿರುವ ಶ್ರದ್ಧೆ, ಪಾತ್ರದ ಬಗೆಗಿನ ಕಾಳಜಿಯನ್ನು ಎತ್ತಿ ತೋರಿಸಿದ್ದಾನೆ. ರಾಹುಲ್ ಬೋಸ್ ಅಪೂರ್ವ ಕಾಸರವಳ್ಳಿ ನಿರ್ದೇಶನದ “ನಿರುತ್ತರ” ಎಂಬ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಟಿ ಭಾವನ ಅವರ ಸೋದರ ಅರವಿಂದ್ ರಾಮಣ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಭಾವನ, ಐಂದ್ರಿತಾ ರೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಆ ಪಾತ್ರಕ್ಕೆ ಡ್ಯಾಬ್ ಮಾಡಿ ಮಧ್ಯಮದವರೊಡನೆ ಮಾತನಾಡಿದ ಬೋಸ್ ಒಬ್ಬ ಕಲಾವಿದ ಆ ಭಾಷೆಯನ್ನು ಕಲಿತು ಡ್ಯಾಬ್ ಮಾಡಿದಾಗಲೇ ಆ ಪಾತ್ರ ಸಂಪೂರ್ಣವಾಗುತ್ತದೆ, ಬೇರೆಯವರು ಡ್ಯಾಬ್ ಮಾಡಿದರೆ ಅದರಲ್ಲಿ ಏನು ವಿಶೇಷವಿದೆ ಎಂದರು. ಅಲ್ಲದೇ ಕನ್ನಡ ಸುಂದರವಾದ ಭಾಷೆ, ಕಲಿಯಲು ಅಷ್ಟೇನೂ ಕಷ್ಟವಲ್ಲ ಎಂದೂ ಅಭಿಪ್ರಾಯ ಪಟ್ಟರು.

ಇವರಿಗಿರುವ ಈಶ್ರದ್ಧೆ, ಸದ್ಗುಣ ಬೇರೆಯವರಲ್ಲೂ ಇದ್ದರೆ ಎಷ್ಟು ಚೆನ್ನ? ರಾಹುಲ್ ಭೋಸ್ ಗೆ ಭೇಷ್ ಅನ್ನೋಣವೇ?

RESPONSIVE LEADERBOARD AD AREA
RESPONSIVE LEADERBOARD AD AREA
To Top