RESPONSIVE LEADERBOARD AD AREA
Movie Reviews

MOVIE REVIEW: ನಂಬಿಕೆ ಮತ್ತು ಅಪನಂಬಿಕೆಗಳ ರೋಡಿನಲ್ಲಿ ಭರಪೂರ ''ಥ್ರಿಲ್'' ಕೊಡುವ ಲಾಸ್ಟ್ ಬಸ್

ಒಂದೊಳ್ಳೆ ಟ್ರೈಲರ್ ನಿಂದ ಗಮನ ಸೆಳೆದಿದ್ದ ”ಲಾಸ್ಟ್ ಬಸ್” ಇಂದು ಬಿಡುಗಡೆಯಾಗಿದೆ. ಟ್ರೈಲರ್ ನಂಬಿ ಥಿಯೇಟರ್ ಗೆ ಬಂದು ಕೂರುವವರಿಗೆ ಇಂಟ್ರೆಸ್ಟಿಂಗ್ ಮತ್ತು ಥ್ರಿಲಿಂಗ್ ರೌಂಡು ಹೊಡೆಸಿ ಕಳಿಸುತ್ತದೆ”ಲಾಸ್ಟ್ ಬಸ್”

ಕಥೆ

 

ಸಾಮಾನ್ಯ, ಅಸಾಮಾನ್ಯ ಮತ್ತು ಜೀವನದ ಅತ್ಯಂತ ಮುಖ್ಯ ಕೆಲಸಕ್ಕಾಗಿ ಪ್ರಯಾಣ ಹೊರಟ ಒಂದಷ್ಟು ಪ್ರಯಾಣಿಕರನ್ನು ತನ್ನೊಳಗೆ ಹತ್ತಿಸಿಕೊಂಡ ”ಲಾಸ್ಟ್ ಬಸ್” ದಟ್ಟಕಾಡಿನ ಮಧ್ಯೆ ಅನಿರೀಕ್ಷಿತವಾಗಿ ನಿಂತುಹೋಗುತ್ತದೆ. ಪ್ರಯಾಣ ಮುಂದುವರೆಸಲಿಚ್ಚಿಸಿದ ಪ್ರಮುಖ ಪ್ರಯಾಣಿಕರು ನಿಗೂಢವಾದ ಮನೆಯೊಂದರಲ್ಲಿ ಬಂಧಿಯಾಗುತ್ತಾರೆ. ಆ ಮನೆಯಾದರೂ ಎಂತಹುದು? ಆ ಮನೆ ಅವರನ್ನು ಕರೆಸಿಕೊಂಡಿತಾ? ಇಲ್ಲಾ ಯಾರಾದರೂ ಇವರನ್ನ ಅದರೊಳಗೆ ದಬ್ಬಿದರಾ? ಅಲ್ಲಿ ಹುಟ್ಟಿಕೊಂಡ ಸಮಸ್ಯೆಗಳೇನು, ಹಿಂದಿರುವ ಕಾಣದ ಕೈಗಳ ಉದ್ದೇಶವೇನು? ಅಸಲಿ ಪ್ರಯಾಣಿಕರು ತಮ್ಮ ಪ್ರಯಾಣ ಮುಂದುವರೆಸುತ್ತಾರಾ?

ತಿಳಿದುಕೊಳ್ಳಲು ”ಲಾಸ್ಟ್ ಬಸ್” ನೋಡಲೇಬೇಕು ನೀವು

ಅಭಿನಯ

 

ಪ್ರಮುಖ ಪ್ರಯಾಣಿಕರ ಪಾತ್ರಗಳಲ್ಲಿ ನಟಿಸಿರುವ ಅವಿನಾಶ್ ನರಸಿಂಹರಾಜು, ಸಮರ್ಥ್ ನರಸಿಂಹರಾಜು, ಮೇಘಶ್ರೀ ಭಾಗವತರ್, ಮಾನಸ ಜೋಶಿ ಮತ್ತು ದೀಪ ಗೌಡ ಎಲ್ಲರೂ ಬಹಳ ಅಚ್ಚುಕಟ್ಟಾಗಿ ಅಭಿನಯಿಸಿರುವುದು ಚಿತ್ರದ ಹೆಚ್ಚುಗಾರಿಕೆ.

ಸಣ್ಣ ಮನಸಿನ ಕಿರುತೆರೆ ನಿರ್ದೇಶಕನಾಗಿ ಪ್ರಕಾಶ್ ಬೆಳವಾಡಿ ಮತ್ತೊಮ್ಮೆ ತಮ್ಮ ”ಕ್ಲಾಸ್” ತೋರಿಸಿದ್ದಾರೆ.

ತಾಂತ್ರಿಕತೆ

 

ಸಂಗೀತ, ಹಿನ್ನೆಲೆ ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಗೆದ್ದಿದ್ದಾರೆ ಎಸ್ ಡಿ ಅರವಿಂದ್.. ಚಿತ್ರದುದ್ದಕ್ಕೂ ಎಲ್ಲೂ ಹಿಡಿತ ತಪ್ಪದೆ ಹದವಾದ ನಿರೂಪಣೆಯಿಂದ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿಕೊಂಡು, ಪ್ರೇಕ್ಷಕರನ್ನು ಅಚ್ಚರಿಗೆ ತಳ್ಳುತ್ತಾ ಸಾಗುವ ”ಲಾಸ್ಟ್ ಬಸ್”ನ ರೂವಾರಿಯಾದ ಅರವಿಂದರಿಗೆ ನಮ್ಮ ಸಲಾಮ್.

ಅನಂತ ಅರಸರ ಕ್ಯಾಮರ ಕಾಡಿನ ರಮ್ಯ ಹಸಿರಿನ ಜೊತೆಗೆ, ನಿಗೂಢತೆಯ ವಿವಿಧ ಮಜಲುಗಳನ್ನು ಸಮರ್ಪಕವಾಗಿ ಸೆರೆಹಿಡಿದಿದೆ.

ಸಿನಿಮಾದ ಪ್ಲಸ್ ಪಾಯಂಟ್ಸ್ (+)

 

1. ಕಥೆ ಮತ್ತು ಚಿತ್ರಕಥೆ

2. ಎಲ್ಲಾ ಪಾತ್ರಧಾರಿಗಳ ಅಭಿನಯ

3. ಭಯ ಹುಟ್ಟಿಸುವ ಸನ್ನಿವೇಶಗಳು

4. ಕ್ಲೈಮ್ಯಾಕ್ಸ್ ಗೆ ಮುಂಚೆ ಬರುವ ”ದೂರೀ” ಹಾಡು

 

ಸಿನಿಮಾದ ಮೈನಸ್ ಪಾಯಂಟ್ (-)

 

1. ಕೆಲವು ಕಡೆ ಅಸಹಜವೆನಿಸುವ ಗ್ರ್ಯಾಫಿಕ್ಸ್

ಕೊನೆ ಮಾತು

 

ಚಳಿಗಾಲದ ಕೊನೆಯ ಹಂತದ ಚಳಿ ಮುಗಿಯುತ್ತಿರುವ ಈ ಸಂದರ್ಭದಲ್ಲಿ ”ಲಾಸ್ಟ್ ಬಸ್” ಒಂದೊಳ್ಳೆ ಬೆಚ್ಚನೆಯ ಅನುಭವ ಕೊಡುತ್ತದೆ. ಮುಂದೇನಾಗುತ್ತದೆ ಅನ್ನುವುದರ ಎಳೆ ಬಿಟ್ಟುಕೊಡದೆ ಕೊನೆಯ ತನಕ ಬಿಟ್ಟಕಣ್ಣು ಬಿಟ್ಟಂತೆ ನೋಡುವಂತೆ ಮಾಡುವ ಈ ಅಪರೂಪದ ಥ್ರಿಲ್ಲರ್ ಸಿನಿಮಾ ನೋಡುವುದು ನಿಮ್ಮ ಪ್ರೈಯಾರಿಟೀ ಆಗಲಿ.ಒಮ್ಮೆ ನೋಡಲೇಬೇಕಾದ ಸಿನಿಮಾ ”ಲಾಸ್ಟ್ ಬಸ್”

RESPONSIVE LEADERBOARD AD AREA
RESPONSIVE LEADERBOARD AD AREA
To Top