RESPONSIVE LEADERBOARD AD AREA
Film News

ನಾರ್ತೀ ಹುಡುಗಿಯ ಕನ್ನಡದ ಕಥೆ ''ಕಂದಿ''ಗೆ ಅಪೂರ್ವ ನಾಯಕಿ

ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ ”ಸಿದ್ದಾರ್ಥ”ನ ನಾಯಕಿ ಅಪೂರ್ವ ಆರೋರ ಅವರನ್ನು ಕನ್ನಡಿಗರು ಮತ್ತೆ ಕರೆಸಿಕೊಂಡಿದ್ದಾರೆ..ಸಿದ್ದಾರ್ಥನ ಪ್ರೇಯಸಿಯಾಗಿ ಮನೋಜ್ಞ ಅಭಿನಯ ನೀಡಿದ್ದ ಈ ಉತ್ತರ ಭಾರತದ ಚೆಲುವೆ ”ಕಂದಿ” ಅನ್ನೋ ವಿಚಿತ್ರ ಶೀರ್ಷಿಕೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ..ಸಿದ್ದಾರ್ಥ ಸಿನಿಮಾ ನೋಡಿದ ಅನೇಕ ಪಡ್ಡೆ ಹುಡುಗರು ಅಪೂರ್ವ ಸರಳ ಸೌಂದರ್ಯಕ್ಕೆ ಫಿದಾ ಆಗಿದ್ದರು.. ”ಹೀರೋಯಿನ್ ಸೂಪರ್ ಗುರು, ಅವ್ಳ್ ಗೋಸ್ಕರನೇ ಎರಡನೇ ಸರಿ ಸಿನಿಮಾ ನೋಡಿದೆ” ಅನ್ನೋ ಹುಡುಗರನ್ನು ನಾವು ನೋಡಿದ್ದೇವೆ.. ಈ ಹುಡುಗಿ ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಲಿ ಅಂತ ಅಂದುಕೊಂಡ ಹುಡುಗರ ಬೇಡಿಕೆಗೆ ಅಸ್ತು ಎಂಬಂತೆ ಈಗ ”ಕಂದಿ” ಸಿನಿಮಾದಲ್ಲಿ ನಟಿಸುತ್ತಿದ್ದಾಳೆ ಅಪೂರ್ವ..

ಬೆಂಗಳೂರಿನಲ್ಲಿ ನೆಲೆಸಿರುವ ನಾರ್ತಿ ಹುಡುಗಿಯ ಕಥೆಯೇ ”ಕಂದಿ” (ಕನ್ನಡ+ಹಿಂದಿ = ಕಂದಿ), ಮತ್ತೆ ಬನ್ನಿ ಪ್ರೀತ್ಸೋಣ ಖ್ಯಾತಿಯ ರವೀಂದ್ರ ದಾಸ್ ಕಂದಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, ಅಪೂರ್ವಾಗೆ ಕನ್ನಡ ಕಲಿಸಿ, ಅವರಿಂದ ಚಿತ್ರಕ್ಕಾಗಿ ಹರುಕು ಮುರುಕು ಕನ್ನಡ ಹಿಂದಿ ಭಾಷೆಗಳನ್ನು ಮಾತನಾಡಿಸುವ ಉದ್ದೇಶ ಅವರದು.. ಒಂದು ವಿಭಿನ್ನ ಚಿತ್ರವೆಂಬ ಭರವಸೆ ಮೂಡಿಸುತ್ತಿರುವ ”ಕಂದಿ” ಚಿತ್ರದ ತಂಡಕ್ಕೆ ಶುಭವಾಗಲಿ.

RESPONSIVE LEADERBOARD AD AREA
RESPONSIVE LEADERBOARD AD AREA
To Top