KendaSampige "ಕೆಂಡಸಂಪಿಗೆ" - Dir : Soori

Meet Greet with all the Kannada Film Lovers and have fun responsibly.
User avatar
James Bond
Posts: 80
Joined: Tue Sep 15, 2015 10:18 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby James Bond » Wed Sep 16, 2015 4:39 pm

RAAJAKUMARA wrote:Watched kendasampige yesterday!!One of the best crime thriller ever,such intensity,technical brilliance is unheard of in kfi recently!!
Suri is a gem who needs to be treasured :P Sathya hegde,Deepu S Kumar,Harikrishna are the second heroes of the film after Sukka Soori!!!
Vikky and manvitha have done a decent job!!But prakash belwadi as a cold corrupt police officer and Rajesh as good guy cop have excelled!!
Sathya hegde's drone shots of durga,davangere,hubli,belagavi are outstanding.Amazing lyrics by bhatru and jayant kaikini are icing on the cake
Overall a near flawless film,now excited about KAAGE BANGARA
A perfect 5/5 for me :P

^:)^


Spanky
Posts: 11
Joined: Wed Sep 16, 2015 11:28 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby Spanky » Wed Sep 16, 2015 11:48 pm

ರಾಕಿಂಗ್ ಸ್ಟಾರ್ ಯಶ್ ಕೆಂಡಸಂಪಿಗೆ ಚಿತ್ರವನ್ನು ಇಂದು ಅಭಿಮಾನಿಗಳ ಜೊತೆ ನೋಡಿ ಬೇಷ್ ಎಂದಿದ್ದಾರೆ. :) :) :)

Image

Gowtham
Posts: 292
Joined: Tue Sep 15, 2015 10:09 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby Gowtham » Wed Sep 16, 2015 11:50 pm

Next time indha first weekend only ee thara maadi media na invite maadbekkkk. Looks a bit late :(

Appu watching it tomorrow

BK Unknownu
Posts: 4
Joined: Thu Sep 17, 2015 12:31 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby BK Unknownu » Thu Sep 17, 2015 12:44 pm

Excellent movie, kenda sampige :). Movie with very less or almost no mistakes.

User avatar
James Bond
Posts: 80
Joined: Tue Sep 15, 2015 10:18 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby James Bond » Sat Sep 19, 2015 8:11 pm

NamCinema contest show rocked.. Suri Sathya and heroin appreciated NamCinema \m/

Spanky
Posts: 11
Joined: Wed Sep 16, 2015 11:28 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby Spanky » Sun Sep 20, 2015 12:12 am

ಕೆಂಡಸಂಪಿಗೆ ತುಂಬಿದ ಗೃಹಗಳೊಂದಿಗೆ ಪ್ರದರ್ಶನಗೊಳ್ಳುತ್ತಿದೆ.. ಕನ್ನಡ ಪ್ರೇಕ್ಷಕ ಒಂದೊಳ್ಳೆ ಸಿನಿಮಾ ಸೋಲದಂತೆ ಕೈ ಹಿಡಿಯಲು ಮುಂದಾಗಿದ್ದಾನೆ..

ಸುಹಾಸ್ ಸುಯಮೀಂದ್ರ ಅವರು ಬರೆದಿರುವ ಈ ವಿಮರ್ಶೆ ಓದಿ..

ಕಿವಿಗಿಂಪು…ಬಲು ಕೆಂಪು… ಕೆಂಡಸಂಪಿಗೆಯಾದರು ಕಣ್ತಂಪು
********************************************************************

“ಎಲ್ಲಾ ಪಯಣದ ದಿಕ್ಕು ಮಣ್ಣು ಎಂದ ಮೇಲೆ
ಜೀವವಿದ್ದರೇನು ಇಲ್ಲದಿದ್ದರೇನು
ದಾರಿ ಎಂದರೇನು ದಿಕ್ಕು ಎಂದರೇನು”

ಈ ಮೂರು ಸಾಲುಗಳು ಲೆಕ್ಕವಿಲ್ಲದಷ್ಟು ಅರ್ಥ ಹೊರಚೆಲ್ಲುತ್ತದೆ , ಆ ಅರ್ಥದ ಸಾರವೆ ಕೆಂಡಸಂಪಿಗೆ ಎಂದು ಸಾರಾಸಗಟಾಗಿ ಹೇಳ್ಬೋದು……….
ಏಳು ದಿನಗಳ ಕೌತುಕಭರಿತ ಪ್ರಯಾಣವನ್ನು 98 ನಿಮಿಷದಲ್ಲಿ ಸೆರೆ ಹಿಡಿಯುವುದು , ಮತ್ತು ನನ್ನಂತ ಮಂದಬುಧ್ಧಿಯ ಪ್ರೇಕ್ಷಕನಿಗು ಕಾಲಾಡಿಸಲು ಅವಕಾಶ ಕೊಡದಂತೆ ಕುತೂಹಲದ ತುತ್ತತುದಿಯಲಿ ಕೂರಿಸಲು ಸೂರಿ ಸರ್ ಅಂಥ ತಾಂತ್ರಿಕ ದೈತ್ಯನಿಗಷ್ಟೆ ಸಾಧ್ಯ………..

ರೈಲಿನ ಎರಡು ಹಳಿ ಎಲ್ಲಿಯೂ ಸೇರಲ್ಲ ……..
ಆದರು ಅದು ಪ್ರಯಾಣಿಕರನ್ನು ಎಲ್ಲಿ ತಲುಪಿಸಬೇಕೋ ಅಲ್ಲಿ ತಲುಪಿಸುತ್ತದೆ……….

ಕೆಂಡಸಂಪಿಗೆ ಹಾಗೆ………….
ಒಂದು ಹಳಿ “ಕಾಗೆ ಬಂಗಾರ”ವಾಗಿ ಮುಂದಿನ ವರುಷ ಬರಲು ಸಿದ್ದವಾಗಿದ್ದರೆ ,
ಅದರ ಉಪಸಂಹಾರ “ಗಿಣಿಮರಿಕೇಸ್” ಈಗಾಗಲೆ ಕನ್ನಡಿಗರ ಮನದಲ್ಲಿ ಅಚ್ಚಾಗುವ ಭದ್ರ ಮುದ್ರೆ ಒತ್ತಾಗಿದೆ………..
ಸಾಮಾನ್ಯವಾಗಿ ಚಿತ್ರಗಳು ಭಾಗಗಳಲ್ಲಿ ಬಂದಾಗ ಮೊದಲೊಂದು , ಮತ್ತೊಂದು , ಮಗದೊಂದು ಎಂಬುದಾಗಿ Serial numberwise ಬರುವುದು ನೋಡಿದ್ದೇವೆ, ಆದರಿಲ್ಲಿ ಭಿನ್ನತೆ ಮೆರೆಯುವ ಸೂರಿ ಎರಡನೆ ಪಾರ್ಟ್ ಅನ್ನು ಮೊದಲು ಬಿಡುಗಡೆ ಮಾಡಿದ್ದಾರೆ ,
“ಅರೆ !!! ಇವ್ನೇನ್ ತಲೆ ಕೆಟ್ಟೋವ್ನ” ಅಂದ್ಕೊಡ್ರೆ ಅದು ತಪ್ಪು , ಇವ್ರು ತಲೆ ಕೆಟ್ಟೋವ್ರಲ್ಲ ಬದಲಿಗೆ ವಿಭಿನ್ನತೆಗೆ , ಚಿತ್ರಪ್ರೇಮಕ್ಕೆ ತಲೆ ಕೊಟ್ಟೋವ್ರು ನಮ್ ಸೂರಿ……..
ಚಿತ್ರದಲ್ಲಿ ಕ್ರೈಮ್ ಇದ್ದರು ಇಲ್ಯಾರು "ರೌಡೀಸ್" ಇಲ್ಲಾ….ಇಲ್ಲಿರುವುದು ಬರೀ “ರೋಡೀಸ್”………ಯಾಕಂದ್ರೆ ಚಿತ್ರ ಆರಂಭವಾಗುವುದೆ ರೋಡ್ನಿಂದ……..
ತಪ್ಪು ರೋಡಿನಲ್ಲಿ ಹೋಗಿರುವವರನ್ನು ಅದೇ ರೋಡಿನಲ್ಲಿ ಹೋಗಿ ಸರಿ ರೋಡಿಗೆ ತಲುಪಿಸುವ ಕಾರ್ಯದಲ್ಲಿ ಭರ್ಜರಿ ಕುತುಹಲ ತುಂಬಿದ್ದಾರೆ ಸೂರಿ……..
ಎಲ್ಲಿ ಏನಾದರು ಇದರಿಂದ ಇನ್ನೇನಾಗುತ್ತದೆ ಎಂಬ ಯಕ್ಷಪ್ರಶ್ನೆ ಪ್ರೇಕ್ಷಕನ ಮನಸಲ್ಲಿ ಪ್ರತಿಕ್ಷಣವು ಮನೆ ಮಾಡುತ್ತದೆ……….
ಆ ಪ್ರಶ್ನೆಗೆ ಉತ್ತರ ಸಿಗುವಷ್ಟರಲ್ಲಿ ಮತ್ತಿನ್ನೇನು ಆಗಿರುತ್ತದೆ……..
ಅಷ್ಟರ ಮಟ್ಟಿಗೆ ಚಿತ್ರ Curios ಮತ್ತೆ ಸ್ವಲ್ಪ Ferocious.

ಪೋಲೀಸ್ ಇಲಾಖೆಯಲ್ಲಿರುವ ಕೆಲ ವ್ಯಕ್ತಿಗಳ ಮತ್ತೊಂದು ಕರಾಳ ಮುಖವನ್ನು ತೋರಿಸುವುದರಲ್ಲಿ ಸೂರಿಗಿರುವ ತಾಕತ್ತು ಬಹುಶ: ಯಾವ ಗಂಡಿಗೂ ಇಲ್ಲವೇನು…….
ಹೀಗೂ ಇರುತ್ತಾರ ಎಂಬ ಆತಂಕಭರಿತ ಪ್ರಶ್ನೆಯನ್ನು ಪ್ರಕಾಶ್ ಬೆಳವಾಡಿ ಅಭಿನಯಿಸಿರುವ ಕಮಿಷ್ನರ್ Character ನಿಮ್ಮಲ್ಲಿ ಹೆದರಿಕೆಯನ್ನು ಹುಟ್ಟಿಸಿದರೇ…………
ವಾಹ್!!!!! ಇಂಥವರು ಇದ್ದಾರ ಅನಿಸುವಂತೆ ರಾಜೇಶ್ ನಟರಂಗ ನಟಿಸಿರುವ ಎಸಿಪಿ ಪಾತ್ರಧಾರಿ ನಿಮಗೆ ಅರಿವಿಲ್ಲದಂತೆ ನಿಮ್ಮ ಕಣ್ತುಂಬಿಸಿರುತ್ತದೆ…………..
ಬಹುಶ: ಪೋಲೀಸ್ ಇಲಾಖೆಯ ಅಸಲಿ ಒಳಮರ್ಮ , ಅವರ ನೆಟ್ವರ್ಕಿಂಗ್ , ಅವರ working style , ಡೀಟೇಲ್ಡ್ ಆಗಿ ತೋರಿಸದಿದ್ದರು , ಅದರ ಇಂಪ್ಯಾಕ್ಟ್ ಎಷ್ಟು ಪರಿಣಾಮಕಾರಿಯಾಗಿರಬಹುದೆಂದು "ಕೆಂಡಸಂಪಿಗೆ" ತೋರಿಸಿದಷ್ಟು ಇನ್ನಾವ ಚಿತ್ರವೂ ತೋರಿಸಿಲ್ಲ ಎಂಬುದು ಸ್ಪಷ್ಟ, ಅಷ್ಟರ ಮಟ್ಟಿಗೆ ಇದೆ ಸೂರಿ ಆಂಡ್ ಟೀಮ್ ನ ಪ್ರಿಪರೇಷನ್.

ಮುಗ್ದನೊಬ್ಬನು ಜೀವ ಉಳಿಸಿಕೊಳ್ಳುವ ಭರದಲ್ಲಿ ಎಷ್ಟು ಆಬ್ಸೆಂಟ್ ಮೈಡೆಂಡ್ ಆಗಿರುತ್ತನೆ , ಅದೇ ರೀತಿ ಅಂಥ ಮುಗ್ಧನನ್ನು ಪ್ರೀತಿಸಿದ ಸ್ನಿಗ್ಧ ಸೌಂದರ್ಯವತಿ ತನ್ನ ಪ್ರಿಯಕರನನ್ನು ಉಳಿಸಲು ಏಷ್ಟು ಪ್ರೋ ಆಕ್ಟೀವ್ ಮೈಡೆಂಡ್ ಆಗಿರುತ್ತಾಳೆ ಎಂಬುದನ್ನು ಸಖತ್ ಥ್ರಿಲ್ಲಿಂಗ್ ಆಗಿ ತೊರಿಸಿದ್ದಾರೆ ಸೂರಿ……………

ಇಲ್ಲಿ ಪ್ರಕಾಶ್ ಬೆಳವಾಡಿ ಒಂದೆಡೆಯಿಂದ “ಆಟಗಾರ”ನೆನಿಸಿದರೆ, ಮತ್ತೊಂದೆಡೆಯಿಂದ ರಾಜೇಶ್ ನಟರಂಗ ಆಡುವ “ಆಟ”ಅತ್ಯಮೋಘ…… ಆದರೆ ಪರಸ್ಪರ ಉಪಸಂಹಾರದಲ್ಲೆ ಮುಖಾಮುಖಿಯಾಗುವ ಹೊತ್ತಿಗೆ ಪ್ರೇಕ್ಷಕನ ಮುಖದಲ್ಲಿ ನವರಸಗಳನ್ನು ಅರಳಿಸಿಕೊಳ್ಳುವ "ಮೌಕ" ಇಲ್ಲಿ ಸೂರಿ ಕೊಟ್ಟಿದ್ದಾರೆ, ಅಷ್ಟು ಸೂಪರ್ಬ್ ಆಗಿ ನಟಿಸಿದ್ದಾರೆ ಈ ಇಬ್ಬರೂ ಮಹಾಶಯರು, ಇನ್ನು ಹೊಸ ಹುಡುಗ ವಿಕ್ಕಿ ಪಾತ್ರಕ್ಕೆಷ್ಟು ಬೇಕೋ ಅಷ್ಟು ಕೊಡಲು ಏಕೋ ಹಿಂದೇಟು ಹಾಕಿದ್ದಾರೆ , ಮತ್ತು ಅದನ್ನು ಡಬ್ಬಿಂಗ್ ಅಲ್ಲಿ ತಮ್ಮ ಧ್ವನಿ ಏರಿಳಿತದಿಂದ ಕೊಂಚಮಟ್ಟಿಗೆ ಸರಿದೂಗಿಸಿದ್ದಾರೆ. ಇನ್ನು ಚಂದ್ರಮುಖಿ ಮಾನ್ವಿತಾ…..ಈಕೆಯ ಪಾತ್ರ ಪೋಷಣೆಯನ್ನು ಮೋಸ್ಟ್ಲಿ ಯೋಗರಾಜ ಭಟ್ಟರು ಮಾಡಿದರೇನೋ ಅನಿಸುತ್ತದೆ, ಯಾಕಂದ್ರೆ ಯೋಗರಾಜ ಭಟ್ಟರ ಎಂದಿನ ಹೀರೋಯಿನ್ ರ ತುಂಟುತನವನ್ನು ನೀವು ಮಾನ್ವಿತಾರಲ್ಲಿ ನೋಡಬಹುದು, ಅದಕ್ಕೆ ಸರಿಯಾಗಿ “act”ivate ಆಗಿದ್ದಾರೆ ಮಾನ್ವಿತಾ. ಹೆಚ್ಚು ಮಾತನಾಡದ ಪ್ರಶಾಂತ್ ಸಿದ್ದಿ ಕೂಡ ನಿಮಗರಿವಿಲ್ಲದಂತೆ ಮ್ಯಾನರಿಸಂಸ್ ಇಂದ ಇಷ್ಟ ಆಗುತ್ತಾರೆ. ಚಂದ್ರಿಕಾ ಅಪಿಯರನ್ಸ್ ಅಲ್ಲಿರುವ Richness, ಅವರ ಅಭಿನಯದಲ್ಲಿಲ್ಲ ಎಂಬುದೊಂದೆ ಚಿತ್ರಕ್ಕೆ ಕಪ್ಪುಚುಕ್ಕೆ.

ಒಟ್ಟಿನಲ್ಲಿ ನಿಮಗೆ ಚಿತ್ರವನ್ನು ನೋಡುವಂತೆ ಮಾಡುವುದು, ನೋಡುತ್ತಾ ಆತಂಕಕ್ಕೆ ದೂಡುವುದು , ಮುಗಿದಮೇಲೂ ಕಾಡುವುದು ಪ್ರಕಾಶ್ ಬೆಳವಾಡಿ ಮತ್ತು ರಾಜೇಶ್ ನಟರಂಗ………
“ಕೆಂಡ ಸಂಪಿಗೆ”ಯನ್ನು ಕೆಲವೊಮ್ಮೆ ಕೆಂಪು ಕೆಂಪಾಗಿ , ಕೆಲವೊಮ್ಮೆ ಹಚ್ಚ ಹಸಿರಾಗಿ , ಹೀಗೆ ರಂಗುರಂಗಿನ “ರಂಗಿತರಂಗ”ದಂತೆ ತೋರಿಸುವಲ್ಲಿ ಸತ್ಯ ಹೆಗಡೆ ಕಣ್ಣು ಸಖತ್ ಮಜಭೂತಾಗಿ ಕೆಲಸಮಾಡಿದೆ……….
ಹೆಲಿಕಾಮ್ ಬಳಸಿ ತೆಗೆದಿರುವ ಡ್ರೋನ್ ಶಾಟ್ಸ್ ಆಗಸದಿಂದ ಕರುನಾಡ ಎಷ್ಟು ಚೆಂದ ಕಾಣುತ್ತದೆ ಎಂಬುದನ್ನು ಕಣ್ಕೋರೈಸುವಂತೆ ತೋರಿಸುತ್ತದೆ . ಹಾಗೆ ನೋಡಿದರೆ
ಇದು“ಕೆಂಡಸಂಪಿಗೆ” ಎನ್ನುವುದಕ್ಕಿಂತ ಆಗಸದಿಂದ “ಕಂಡಸಂಪಿಗೆ”ಎನಿಸುವಂತೆ ಸತ್ಯ ಹೆಗಡೆ ಮಾಡಿದ್ದಾರೆ. ಮೂಡಿಗೆ ತಕ್ಕ ಹಾಗೆ ಲೈಟಿಂಗ್ , ಕ್ಯಾಮರ ಆಂಗಲ್ಸ್ , ಶಾಟ್ಸ್ ಅಲ್ಲಿ ಆಗಿರುವ intentional shakes ಚಿತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ ಮನಸ್ಸನ್ನು ಆವರಿಸುವಂತೆ ಮಾಡುತ್ತದೆ………ಇಂತಿಪ್ಪ ಹೆಲಿಕಾಮ್ ಬಳಿಸಿರುವ ಚಿತ್ರ ಕನ್ನಡದಲ್ಲಿ ಮತ್ತೊಂದಿಲ್ಲವೆನಿಸುತ್ತದೆ.

ಚಿತ್ರವನ್ನು ಬುಲ್ಲೆಟ್ ಟ್ರೇನಿನ ಸ್ಪೀಡಿಗೆ ಓಡುವಂತೆ ಮಾಡಿ ರಪ್ ಅಂತ ಮುಗಿಸೋದು ದೀಪು .ಎಸ್.ಕುಮಾರ್ ಎಡಿಟಿಂಗ್………….
ಒಂದು ದೃಶ್ಯವಿದೆ …ಗೋಪಾಲಸ್ವಾಮಿ ದೇವಸ್ಥಾನಕ್ಕೆ ಸಂಭಂದಿಸಿದ್ದು ……..ಕೇವಲ 10 ಸೆಕಂಡ್ ಅಲ್ಲಿ ಇಪ್ಪತ್ತೈದಕ್ಕು ಹೆಚ್ಚು ಶಾಟ್ಸ್ ಉಪಯೋಗಿಸಿದ್ದಾರೆ ……….
ಈ ಪರಿಯ ಎಡಿಟಿಂಗ್ ಚಿತ್ರವನ್ನು ಸಖತ್ Fast and Furious ಅನಿಸುತ್ತದೆ…ಮತ್ತು 98 ನಿಮಿಷಗಳು ಕಳೆದದ್ದು ನಿಮಗೆ ಗೊತ್ತೆ ಆಗುವುದಿಲ್ಲ………
ಶಶಿಧರ್ ಅಡಪ ಅವರ ಆರ್ಟ್ ಡೈರೆಕ್ಷನ್ ಕೂಡ ಚಿತ್ರವನ್ನು ಕಲರ್ಫುಲ್ಲ್ ಆಗಿಸುವಲ್ಲಿ ಯಶಸ್ವಿಯಾಗಿದೆ………ಅವರು ಬಳಸಿರುವ ಪ್ರಾಪರ್ಟೀಸ್ “ಕೆಂಡಸಂಪಿಗೆ"ಗೆ ವಿಷ್ಯುವಲ್ ಎನ್ರಿಚ್ಮೆಂಟ್ ಕೊಟ್ಟಿದೆ .

ಇವಿಷ್ಟು ಕಣ್ತಂಪು ಮಾಡಿದರೆ, ಹರಿಕೃಷ್ಣ ಬೆರಳತುದೆ ನಿಮ್ಮ ಕಿವಿಯನ್ನು ಇಂಪಾಗಿಸುತ್ತದೆ……”ಕೆಂಡ ಸಂಪಿಗೆ”ಎಂಥ Genre ನ ಚಿತ್ರಗಳಿಗೆ ಬೇಕಾದ ಮತ್ತು ಪ್ರೇಕ್ಷಕನನ್ನು ಚಿತ್ರದಲ್ಲಿ ಇನ್ವಾಲ್ಸ್ವ್ ಮಾಡುವ ಸಂಗೀತ ನೀಡಿದ್ದಾರೆ ಹರಿಕೃಷ್ಣ ಆದರು ಕೆಲವೊಮ್ಮೆ , ಇನ್ನೂ ಪರಿಣಾಮಕಾರಿಯಾಗಿರಬಹುದಿತ್ತೇನೋ ಅನಿಸಿದರೆ ಅದೂ ನಾವು ಹರಿಕೃಷ್ಣ ಮೇಲಿಟ್ಟಿರುವ ಅಪಾರ ನಂಬಿಕೆ ಮತ್ತು ಅವರ ಕೆಪಾಸಿಟಿ ತೋರಿಸುತ್ತದೆ.
ಕಾಯ್ಕಿಣಿಅವರ “ನೆನಪೆ ನಿತ್ಯ ಮಲ್ಲಿಗೆ” ಕವನವನ್ನು ಸಮಯೋಚಿತವಾಗಿ ಬಳಸಿದ್ದರೆ ಸೂರಿ……ಮತ್ತು ಕಾಯ್ಕಿಣಿ ಸರ್ ಅವರ “ಕನಸಲು ನಡೆಸು” , “ಮರೆಯದು ಕ್ಷಮಿಸು” ಹಾಡುಗಳ ಸಾಲು ಸರಸ – ವಿರಹಗಳ ದ್ಯೊತಕ ಎಲ್ಲಕ್ಕಿಂತ ಹೆಚ್ಚು ಕಾಡುವುದು ಭಟ್ಟರ “ಇಳಿಜಾರು ಹಾದಿಯಿದು”….ಈ ಹಾಡಿನ ಪ್ರತಿಯೊಂದು ಸಾಲು ವೇದೋಕ್ತಿ ಎನಿಸಿದರೆ ಅಚ್ಚರಿಯಿಲ್ಲಾ……ಅ ಮಟ್ಟಕ್ಕೆ ಅರ್ಥಗರ್ಭಿತ ಈ ಹಾಡು …..ಇಲ್ಲಿ ಅಸಹಾಯಕತೆಯಿಂದ ಬಂದಿರುವ ವೈರಾಗ್ಯವಿದೆ, ಮತ್ತು ಸೋಲಿನಿಂದ ಹೊರಸೂಸಿದ ವೇದಾಂತವಿದೆ.

ಸೂರಿಯ ಚಿತ್ರಕತೆಯಲ್ಲಿ ನಮಗೆ ಅಲ್ಲಲ್ಲಿ ದುನಿಯಾ, ಜಾಕಿ , ಕಡ್ಡಿಪುಡಿ ನೆನಪಿಗೆ ಬರಬಹುದೂ, ಆದರೆ ಅವೆಲ್ಲಕ್ಕಿಂತ ಮೀರುವ ವೇಗದ ಸ್ಕ್ರೀನ್ ಪ್ಲೇ “ಕೆಂಡ ಸಂಪಿಗೆ”ಯದ್ದು.
ಅನುರಾಗ್ ಕಷ್ಯಪ್ ರಂತೆ ಕನ್ನಡಕ್ಕು ಒಬ್ಬ ಬೇಕು ಎನಿಸುವವರ ಇಚ್ಚೆಯನ್ನು ಪೂರೈಸುವ ಅಷ್ಟೂ ತಾಕತ್ತು ಇರುವುದು ನಮ್ಮ ಸೂರಿಗೆ ಮಾತ್ರ ಎಂಬುದು ಹೆಮ್ಮೆಯ ವಿಷಯ.
“ಕೆಂಡ ಸಂಪಿಗೆ”ಯ ಸೊಗಸನ್ನು , ಸೊಗಡನ್ನು , ಘಮವನ್ನು ಬಿಡಿ ಬಿಡಿಯಾಗಿ ಪಸರಿಸುತ್ತಾ “ಗಿಣಿಮರಿ ಕೇಸ್” ಅನ್ನು ನಮ್ಮ ಮುಂದಿಟ್ಟಿದ್ದಾರೆ ……..
ಈ ಕೇಸನ್ನು ಗೆಲ್ಲಿಸುವ ಮನಸನ್ನು ಅದಾಗಲೆ ಸಿನಿಪ್ರೇಮಿಗಳು ಮಾಡಾಗಿದೆ…………ಇಂಥಹ “ಕೇಸ್”ಗಳು “ಕೇಸು”ಗಟ್ಟಲೆ ಬರಲಿ…ಇದರಿಂದ ಪ್ರೇಕ್ಷಕರ ಮನರಂಜನೆಯ ಮತ್ತು ನಿರ್ಮಾಪಕರ “ಸೂಟ್ ಕೇಸ್” ತುಂಬಲಿ…………ಎಂದು ಹಾರೈಸುತ್ತಾ “ಕಾಗೆ ಬಂಗಾರ”ವನ್ನು ತೊಡಲು ತುದಿಗಾಲಲ್ಲಿ ನಿಲ್ಲೋಣ………….


Image

Gowtham
Posts: 292
Joined: Tue Sep 15, 2015 10:09 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby Gowtham » Sun Sep 20, 2015 1:21 pm

Superb writeup by Suhas :ymapplause: :ymapplause: :ymapplause:

BTW yesterday NamCinema gave 60 tickets at Arch Mall - Suri, Satya Hegde & Manvitha attended the show & answered candidly to all the questions by Gopanna, Chavez, Aithal & Crazy Kiran.

ImageGowtham
Posts: 292
Joined: Tue Sep 15, 2015 10:09 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby Gowtham » Mon Sep 21, 2015 1:08 pm

Sharath Bhats for NamCinema.com

Image

You want to proudly flaunt Kannada films to your non-Kannadiga friends, don’t you? You want Kannada film industry to come out of the routine stuff and stand tall like a soldier decorated with experimental films. Don’t you? We know you do. That is exactly why a film like Rangitaranga or Kendasapige has to win. They have to win big. They have to win “Entire Gandhi Nagara sits and takes notice” big !! Any industry can grow beyond its perceived limitations only if movies that cater to all kinds of viewers are made. We grow only when we watch good movies that push the boundaries. And we watch such movies only when we have grown!! It is our duty to make sure that something like Kendasampige is not let down.

Suri is the type of director who makes ‘impossible’ seem like a Rajnikanth joke. He is someone who to our pleasure thinks like a painter(You can not possibly go wrong when Sathya Hegde wields the brush!!). Sadly, a film like this is losing theaters. You kill a film like this and you kill 10 such experimental films that are sprouting. If One experimental film fails that will be reason enough for Gandhi Nagara to turn down 10 such scripts.We definitely don’t want that to happen. Our dreams for the Kannada industry are larger than life. The least we can do is to make sure that a film like Kendasampige wins. What are you waiting for ? Go watch it. Send your friends to the movie! Recommend the film to your non- kannadiga friends. We have the responsibility of making good films win at the box office and this is your chance. Go grab the chance!!

https://twitter.com/NamCinema/status/645857695434567683

gopanna
Posts: 63
Joined: Wed Sep 16, 2015 12:51 pm

Re: KendaSampige "ಕೆಂಡಸಂಪಿಗೆ" - Dir : Soori - ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿರುವ

Postby gopanna » Tue Sep 22, 2015 9:55 am

It was nice meeting Soori ,Manvitha and Sathya Hegde in Gopalan Arch mall last weekend. Soori was mobbed by the crowd (a full house in a big audi).He looked ecstatic with the response.Its a huge pride for NC team to organize this show and work towards the right cause of supporing good kannada movies ^:)^

Congrats to the whole team :ymparty:


Return to “Kannada Film Industry”

Who is online

Users browsing this forum: No registered users and 3 guests