Kirik Party - Rakshith; Dir - Rishab shetty

Meet Greet with all the Kannada Film Lovers and have fun responsibly.
Timba
Posts: 3438
Joined: Tue May 24, 2016 12:46 pm

Re: Kirik Party - Rakshith; Dir - Rishab shetty

Postby Timba » Sat Dec 31, 2016 10:48 pm

Image

ಎಲ್ಲರಿಗೂ ಸ್ಪೂರ್ತಿಯಾಗುವ ಕಿರಿಕ್ ಪಾರ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿಂಪ್ಲೀ ಸೂಪರ್ಬ್ ಅನ್ನಬಹುದಾದ ಯೂಥ್ ಫುಲ್ ಸಿನಿಮಾ ಒಂದನ್ನು ಚಿತ್ರರಸಿಕರಿಗೆ ನೀಡಿದ್ದಾರೆ. ಸಮ ಮನಸ್ಕ ಗೆಳೆಯರೊಡನೆ ಸೇರಿ #ಕಿರಿಕ್_ಪಾರ್ಟಿ ಸಿನಿಮಾ ಮಾಡಿ ವರ್ಷಾಂತ್ಯಕ್ಕೆ ಬಿಡುಗಡೆ ಮಾಡಿ ಜನ ಮಜವತ್ತಾಗಿ ನ್ಯೂ ಇಯರ್ ಪಾರ್ಟಿ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ..

ಕಥೆ
********
ಅವನು ಕರ್ಣ, ಅವನೇ ಕಿರಿಕ್ ಪಾರ್ಟಿ, ಅವನಿಂದೆ ಗ್ಯಾಂಗು – ಮಾತ್ ಎತ್ತುದ್ರೆ ಸಾಂಗು.. ಕಾಲೇಜಿನಲ್ಲಿ ಅವನ ಸೀನಿಯರ್ ಟಾಪ್ ಫಿಗರ್ ಸಾನ್ವಿಯೇ ಅವನಿಗೆ ಸ್ಪೂರ್ತಿ.. Obviously ಅವಳ ಮೇಲೆ ಅವನಿಗೆ ಪ್ರೀತಿ. ಒಂದು ಊಹಿಸಲಸಾಧ್ಯ ಟ್ವಿಸ್ಟ್ ನಿಂದ ಒಡೆಯುತ್ತೆ ಕರ್ಣನ ಹೃದಯ, ಅದರಿಂದ ಕ್ಲಾಸ್ ನಿಂದ ಮಾಸ್ ಆಗುವ ಆಗುವ ಸಿಂಪಲ್ ಸ್ಟಾರ್ ಕೊನೆಗೆ ಹಂಬಲ್ ಮ್ಯಾನ್ ಆಗಿ ಬದಲಾಗುವುದರ ಜೊತೆಗೆ ಸಿನಿಮಾ ಸುಖಾಂತ್ಯ..

ತಾಂತ್ರಿಕತೆ
********
ರಕ್ಷಿತ್ ಶೆಟ್ಟಿ ಮತ್ತು ಗೆಳೆಯರು ಬರೆದಿರುವ ಚಿತ್ರಕಥೆ ಸಖತ್ ಫ್ರೆಶ್ ಅನುಭವ ಕೊಡುತ್ತದೆ, ನಿರ್ದೇಶಕರಾದ ರಿಷಭ್ ಶೆಟ್ಟಿ ಚಿತ್ರದ ಮೇಲೆ ಪೂರ್ತಿ ಹಿಡಿತ ಇಟ್ಟುಕೊಂಡು ನಿರ್ದೇಶನ ಮಾಡಿದ್ದಾರೆ.. ಚಿತ್ರವನ್ನು ದೊಡ್ಡಮಟ್ಟದಲ್ಲಿ ರಸಭರಿತವಾಗಿಸಿರೋದು ಅಜನೀಶ್ ಲೋಕನಾಥ್ ರ ಸಖತ್ ಸಂಗೀತ ಮತ್ತು ಹಿನ್ನೆಲೆ ಸಂಗೀತ. ಕರಮ್ ಚಾವ್ಲಾ ಛಾಯಾಗ್ರಹಣ ಚಿತ್ರದ ಬಹುದೊಡ್ಡ ಆಸ್ತಿ..

ಅಭಿನಯ
********
ನೋಡಿ, ಇನ್ಮೇಲೆ ನೀವ್ಯಾರು ನನ್ನನ್ನ ಸಿಂಪಲ್ ಸ್ಟಾರ್ ಅನ್ನಲೇಬಾರದು, ಅಂತ ಜನರಿಗೆ ಹೇಳುವ ಹಾಗೆ ವೆರೈಟಿಯಾಗಿ ಆಕ್ಟಿಂಗ್ ಮಾಡಿದ್ದಾರೆ ರಕ್ಷಿತ್.. ಬಹಳ ಕ್ಯೂಟ್ ಆಗಿ ಕಾಣಿಸುತ್ತಾ ಕಾಲೇಜು ಹಾಸ್ಟೆಲ್ಲು ಕ್ವಾಟ್ಲೆ ಮಾಡುವಾಗಲೂ, ಮಾಸ್ ಫೀಲ್ ನಲ್ಲಿ ವಿಲನ್ ಗಳನ್ನ ಚಚ್ಚುವಾಗಲೂ, ಕೊನೆಗೆ ತಪ್ಪು ಅರಿವಾದ ಹಂಬಲ್ ಮನುಷ್ಯನಾದಾಗಲೂ ಅವರದು ಅಚ್ಚುಕಟ್ಟಾದ ಅಭಿನಯ..

ರಶ್ಮಿಕಾ ಮಂದಣ್ಣ ಸರಳ ಸುಂದರಿ.. ಅವರ ಸ್ಮೈಲು ‘ಅರೆರೆರೆ – ಅಬ್ಬಬ್ಬ’ ಅನಿಸುವಷ್ಟು ಮೋಹಕವಾಗಿದೆ.. ತೆರೆಯ ಮೇಲೆ ಇರುವಷ್ಟೂ ಹೊತ್ತು ಸಿನಿಮಾದಲ್ಲಿ ಅವರದೇ ಹವಾ.. ಚಿತ್ರರಂಗದಲ್ಲಿ ಅವರ ಭವಿಷ್ಯ ಉಜ್ವಲವಾಗಿದೆ.. ಅವರಿಗೆ ಶುಭವಾಗಲಿ..

ಎರಡನೆಯ ನಾಯಕಿ ಸಂಯುಕ್ತ ಅನುಭವಿ ನಟಿಯಂತೆ ಅಭಿನಯಿಸಿದ್ದಾರೆ, ರಕ್ಷಿತ್ ಸ್ನೇಹವೃಂದದ ಎಲ್ಲರದೂ ನ್ಯಾಚುರಲ್ ಆಕ್ಟಿಂಗ್..

ಕೊನೇ ಮಾತು
********
ಬಿಡುಗಡೆಯ ಮುಂಚೆಯೇ ಕಿರಿಕ್ ಪಾರ್ಟಿಯ ಹವಾ ಜೋರಾಗಿಯೇ ಇತ್ತು, ಟ್ರೈಲರ್ರು, ಪೋಸ್ಟರ್ರು, ಸಾಂಗುಗಳು ಯುವ ಪ್ರೇಕ್ಷಕರಿಗೆ ರಚ್ಚೆ ಹಿಡಿಸಿದ್ದವು.. ಸಿನಿಮಾ ಇದ್ದೆಲ್ಲಾ ನಿರೀಕ್ಷೆಗಳನ್ನು ತೃಪ್ತಿಪಡಿಸಿ ಹೊಸ ಅನುಭವ ಕೊಡುತ್ತದೆ. ರಕ್ಷಿತ್ ವೃತ್ತಿ ಜೀವನದಲ್ಲೇ ಅತ್ಯಂತ ದೊಡ್ಡ ಯಶಸ್ಸಾಗಿ ಕಿರಿಕ್ ಪಾರ್ಟಿ ಹೊರಹೊಮ್ಮಲಿದೆ.. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಮತ್ತು ತಂಡಕ್ಕೆ ಅಭಿನಂದನೆಗಳು..

ಹೊಸ ವರ್ಷಕ್ಕೆ ಚಿತ್ರರಂಗಕ್ಕೆ ಹೊಸ ಹುರುಪು ಕೊಟ್ಟ ಕಿರಿಕ್ ಪಾರ್ಟಿ ನೋಡೋದು ಮರೀಬೇಡಿ..

Rating – 4 Stars
All pics n their credits belong to the original uploader or the websites. :-B Thank you :-bd

arpan
Posts: 60
Joined: Wed Sep 16, 2015 10:30 am

Re: Kirik Party - Rakshith; Dir - Rishab shetty

Postby arpan » Tue Jan 03, 2017 10:32 pm

Movie was very good though some portions reminds premam, banglore days , movie was thoroughly enjoyable will watch second time in coming weeks :-bd

Goodman
Posts: 193
Joined: Wed Sep 16, 2015 2:24 pm

Re: Kirik Party - Rakshith; Dir - Rishab shetty

Postby Goodman » Wed Jan 04, 2017 12:01 pm

Watched the movie yesterday night show @Rockline.

Coming to the movie .Over all decent gud watch inspite of the dragging second half.
Rakshith is not consistent with this acting at some places but over all he looked charming especially in first half as a kirik student.
Songs are very fresh and giving thumping feeling by music director Ajeensh lokanth ,also the ravishing BGM.
Both Heroines have done justice to there role.Comedy is ribtickling at many places.Fights are bit unique than the normal commercial fights.

Over all funfilled watch with some emotional moments especially for youngsters who are still fresh from college or who still are in college hangover!.Also some scenes seem to have been lifted or inspired from Premam movie .

Over all rating :3.25/5

Timba
Posts: 3438
Joined: Tue May 24, 2016 12:46 pm

Re: Kirik Party - Rakshith; Dir - Rishab shetty

Postby Timba » Thu Jan 05, 2017 10:43 pm

Navrang 7.15 show had very good crowd thru out the weekend.. used to see very good Q before show time. \m/
All pics n their credits belong to the original uploader or the websites. :-B Thank you :-bd

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Kirik Party - Rakshith; Dir - Rishab shetty

Postby sanjay » Fri Jan 06, 2017 3:16 pm

Timba wrote:Navrang 7.15 show had very good crowd thru out the weekend.. used to see very good Q before show time. \m/

ondsalanadru nodidra :ymsigh: :ymsigh: :ymdaydream:
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

Timba
Posts: 3438
Joined: Tue May 24, 2016 12:46 pm

Re: Kirik Party - Rakshith; Dir - Rishab shetty

Postby Timba » Sat Jan 07, 2017 10:19 am

sanjay wrote:
Timba wrote:Navrang 7.15 show had very good crowd thru out the weekend.. used to see very good Q before show time. \m/

ondsalanadru nodidra :ymsigh: :ymsigh: :ymdaydream:

Bz doing kirik myslf :lol: no time yet..
Neevu bhaarathakke vaaps bandra..
All pics n their credits belong to the original uploader or the websites. :-B Thank you :-bd

sandeep sunstar
Posts: 87
Joined: Wed Sep 16, 2015 10:32 am

Re: Kirik Party - Rakshith; Dir - Rishab shetty

Postby sandeep sunstar » Sat Jan 07, 2017 1:11 pm

Avaru baralla London mayor agthare

Sent from my Lenovo K50a40 using Tapatalk

User avatar
Ajay Puneeth
Posts: 670
Joined: Tue Sep 22, 2015 10:38 am

Re: Kirik Party - Rakshith; Dir - Rishab shetty

Postby Ajay Puneeth » Sun Jan 08, 2017 11:00 pm

1240 Multiplex shows (1st week)
Top 4
More details will post soon

User avatar
Ajay Puneeth
Posts: 670
Joined: Tue Sep 22, 2015 10:38 am

Re: Kirik Party - Rakshith; Dir - Rishab shetty

Postby Ajay Puneeth » Mon Jan 09, 2017 7:14 pm

Highest 1st week Multiplex Shows

1. Doddmane hudga - 1595 Shows
2. Chakravyuha - 1420 Shows
3. Masterpiece - 1253 Shows
4. Kirik Party - 1240 shows
5. Ranna - 1238 shows
6. Santhu SF - 1153 shows
7. Mungaru male 2 - 1129 shows
8. Kotigobba 2 - 1043 Shows
9. Mukunda Murari - 952 shows
10. Mr.Airavatha - 945 shows

User avatar
sanjay
Posts: 230
Joined: Tue Sep 15, 2015 11:08 pm
Location: Royal Mysuru

Re: Kirik Party - Rakshith; Dir - Rishab shetty

Postby sanjay » Wed Jan 11, 2017 9:39 am

Image

ಬಿಡುಗಡೆಯಾದ ಎರಡನೇ ವಾರದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 18 ಕೋಟಿ ರೂಪಾಯಿ ಗಳಿಕೆಯ ನಂತರ ಕರ್ನಾಟಕದಲ್ಲಿ ಅಗಾಧ ಯಶಸ್ಸು ಕಂಡ ಕಿರಿಕ್ ಪಾರ್ಟಿ ಚಿತ್ರ ಇದೀಗ ಗಡಿಯಾಚೆ ದಾಟಿ ಸುದ್ದಿ ಮಾಡುತ್ತಿದೆ. ರಕ್ಷಿತ್ ಶೆಟ್ಟಿ ನಟನೆಯ ಚಿತ್ರ ಕಿರಿಕ್ ಪಾರ್ಟಿ ದುಬೈಯಲ್ಲಿ ಕಳೆದ ವಾರಾಂತ್ಯ ಬಿಡುಗಡೆಯಾಗಿದ್ದು 20ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಂಡಿದೆ. ಮತ್ತು ಕೇವಲ ಮೂರು ದಿನಗಳಲ್ಲಿ ಸುಮಾರು 50 ಲಕ್ಷ ರೂಪಾಯಿ ಗಳಿಕೆ ಕಂಡಿದೆ. ದುಬೈಯಲ್ಲಿ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ಹಣ ಗಳಿಕೆ ಕಂಡ ಚಿತ್ರವಿದು.
ಕಿರಿಕ್ ಪಾರ್ಟಿ ಚಿತ್ರ ಅಬು ದಾಬಿಯಲ್ಲಿ ಕೂಡ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಟಿಸಿದ ರಕ್ಷಿತ್, ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರಶ್ಮಿಕಾ ಮಂದಣ್ಣ ಅಲ್ಲಿನ ಥಿಯೇಟರ್ ಗಳಿಗೆ ಭೇಟಿ ನೀಡಿದಾಗ ಜನರ ಪ್ರತಿಕ್ರಿಯೆ ಕಂಡು ತುಂಬಾ ಖುಷಿಪಟ್ಟಿದ್ದಾರೆ. ಪರಮ್ವ ಸ್ಟುಡಿಯೋ ಜೊತೆ ಸಹಭಾಗಿತ್ವ ಹೊಂದಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ದುಬೈಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಕನ್ನಡ ಚಿತ್ರ ಕಿರಿಕ್ ಪಾರ್ಟಿಯಾಗಿದೆ ಎಂದರು.
ಕನ್ನಡೇತರರು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳನ್ನು ವೀಕ್ಷಿಸಲು ಒಲವು ತೋರುತ್ತಿದ್ದು, ಕಿರಿಕ್ ಪಾರ್ಟಿಯನ್ನು ಇನ್ನಷ್ಟು ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಚಿತ್ರ ಆಸ್ಟ್ರೇಲಿಯಾ, ಇಂಗ್ಲೆಂಡ್ ಗಳಲ್ಲಿ ಜನವರಿ 21ರಂದು ಮತ್ತು ಅಮೆರಿಕಾದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ತೆರೆ ಕಾಣಲಿದೆ.
ಸಿಂಹ ಹೋಗೋ ದಾರಿಯಲ್ಲಿ ಹೆಜ್ಜೆ ಗುರುತು ನೋಡಿದೆ

sandeep sunstar
Posts: 87
Joined: Wed Sep 16, 2015 10:32 am

Re: Kirik Party - Rakshith; Dir - Rishab shetty

Postby sandeep sunstar » Fri Jan 13, 2017 12:13 am

18 cores he he he he he

Sent from my Lenovo K50a40 using Tapatalk

User avatar
Ajay Puneeth
Posts: 670
Joined: Tue Sep 22, 2015 10:38 am

Re: Kirik Party - Rakshith; Dir - Rishab shetty

Postby Ajay Puneeth » Sun Jan 15, 2017 8:59 am

2nd Week highest Multiplex shows

1. Kirik party - 1313 shows
2. Mungaru male 2 - 1037 shows
3. Masterpiece - 975 shows
4. Kotigobba 2 - 843 shows
5. Santhu SF - 807 shows
6. Doddmane hudga - 783 shows
7. Uppi 2 - 774 shows
8. Mr and Mrs ramachari - 771 shows
9. Ranna - 722 shows
10. U-turn - 647 shows


Return to “Kannada Film Industry”

Who is online

Users browsing this forum: No registered users and 2 guests