RESPONSIVE LEADERBOARD AD AREA
Movie Reviews

MOVIE REVIEW : Aatagara – An exciting game.

ಆಟಗಾರ – ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಉತ್ತಮ ಚಿತ್ರದ ಸೇರ್ಪಡೆ. 
ಲ್ಯಾಗ್ ಅನ್ನಿಸುವಂಥವ ದೃಶ್ಯಗಳು, ಅನವಶ್ಯಕವಾದ ಹಾಡುಗಳು ಅಥವಾ ತರ್ಕರಹಿತ ಹೊಡೆದಾಟ ಇದ್ಯಾವುದೂ ಒಳ್ಳೆಯ ಚಿತ್ರವೊಂದು ಬಂದಿದೆ, ಆ ಚಿತ್ರವೇ ಇಂದು ಬಿಡುಗಡೆಯಾಗಿರುವ “ಆಟಗಾರ”.’ಬಿಗ್ ಬಾಸ್’ ನಂಥಹ ಒಂದು ರಿಯಾಲಿಟಿ ಶೋ, ಅದರೊಳಗೆ ಹತ್ತು ಮಂದಿ ಸ್ಪರ್ಧಿಗಳು, ರಿಯಾಲಿಟ್ ಶೋ ಪ್ರಾರಂಭವಾಗುವುದಕ್ಕೆ ಮುಂಚೆಯೇ ಇವರ ನಡುವೆ ನಡೆಯುವ ರೋಚಕ ಘಟನೆಗಳ ಸಮ್ಮಿಶ್ರವೇ ಆಟಗಾರ.
ಆಟಗಾರನ ಸ್ಪೆಶಾಲಿಟಿ ಏನು ಅಂದರೆ  ಚಿತ್ರ ಪ್ರಾರಂಭವಾಗುವ ಹರಿನೈದು ಇಪ್ಪತ್ತು ನಿಮಿಷದಲ್ಲೇ ತಿರಿವುಗಳನ್ನು ಪಡೆದು ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂಡಿಸುತ್ತದೆ. ಮುಂದೇನಾಗಬಹುದು ಎಂದು ಪ್ರೇಕ್ಷಕ ಚಿತ್ರದೊಳಗೆ ತನ್ಮಯನಾಗುತ್ತಾನೆ, ಸಿನಿಮಾ ಪ್ರೇಕ್ಷಕನನ್ನು ಬರಸೆಳೆದು ಕೂರಿಸಿಕೊಳ್ಳುತ್ತದೆ.
ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ ತಾರಾಗಣ. ಪ್ರತಿಯೊಂದು ಪಾತ್ರಕ್ಕೂ ತೂಕವಿರುವ ಕಲಾವಿದರ ಆಯ್ಕೆಮಾಡಿ ನಿರ್ದೇಶಕ ಚೈತನ್ಯ ಅವರು ತಮ್ಮ ಕೌಶಲವನ್ನು ಪ್ರದರ್ಶಿಸಿದ್ದಾರೆ. ಕಥೆಗೆ ಪ್ರಾಧಾನ್ಯವಿರುವ ಚಿತ್ರದಲ್ಲಿ ನಟಿಸುವ ಮೂಲದ “ಚಿರು ಸರ್ಜಾ” ಮೆಚ್ಚುಗೆ ಪಡೆಯುತ್ತಾರೆ. ಅನಂತ್ ನಾಗ್ ಹಾಗೂ ರವಿಶಂಕರ್ ಅವರ ನಟನೆ ಅತ್ಯುತ್ತಮ. ಮೇಘನ ರಾಜ್ ತಾವೊಬ್ಬ ಉತ್ತಮ ನಟಿ ಎನ್ನುವುದನ್ನು ಮತ್ತೊಮ್ಮೆ ಸಾಭೀತು ಪಡಿಸುತ್ತಾರೆ. ರೋಹಿತ್ ಪದಕಿ ಅವರ ಚುರುಕು ಸಂಭಾಷಣೆ ಗೆ ಶಿಲ್ಲೆ ಗಳು ಬೀಳುತ್ತವೆ. ರೋಹಿತ್ ಪದಕಿ ಅವರು ಚಿತ್ರದ ಬಹುದೊಡ್ಡ ಪ್ಲಸ್ ಪಾಯಂಟ್ ಅನ್ನಬಹುದು..
ಅನೂಪ್ ಸೀಳಿನ್ ಅವರ “ತಾರಮ್ಮಯ್ಯ” ಹಾಗೂ “ಆಟಗಾರ” ಹಾಡುಗಳು ಜನಪ್ರಿಯವಾಗುವುದರಲ್ಲಿ ಯಾವುದೇ ಸಂದೇಶವಿಲ್ಲ. ಇನ್ನು ಹಿನ್ನೆಲೆ ಸಂಗೀತ ಚಿತ್ರ ಮುಗಿದ ನಂತರವೂ ನಿಮ್ಮನ್ನು ಕಾಡುತ್ತದೆ. ಅನೂಪ್ ಸೀಳಿನ್ ಕನ್ನಡದ ಆಸ್ತಿಯಾಗಬಲ್ಲಂತಹ ಸಂಗೀತ ನಿರ್ದೇಶಕ ಎಂದು ”ಆಟಗಾರ” ಮತ್ತೊಮ್ಮೆ ತಿಳಿಹೇಳುತ್ತದೆ.
ತಾಂತ್ರಿಕವಾಗಿ ಚಿತ್ರ ಇನ್ನೂ ಶ್ರೀಮಂತವಾಗಿ ಮೂಡಿಬರಬಹುದಿತ್ತು. ಥ್ರಿಲ್ಲರ್ ಸಬ್ಜೆಕ್ಟ್ ಆದ್ದರಿಂದ
ಲೈಟಿಂಗ್ ಇನ್ನಾ ಪರಿಣಾಮಕಾರಿಯಾಗಿರಬಹುದಿತ್ತು. ಇಂತಹ ಕೆಲವು ಸಣ್ಣ ಲೋಪಗಳನ್ನು ಹೊರತು ಪಡಿಸಿ ಆಟಗಾರ ಒಂದು ಅತ್ಯುತ್ತಮ ಚಿತ್ರ, ಇಂತಹ ಒಳ್ಳೆಯ ಥ್ರಿಲ್ಲರ್ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿ ತಮ್ಮ ಆ ದಿನಗಳ ವರ್ಚಸ್ಸಿಗೆ ಮರಳಿರುವ ಕೆ ಎಂ ಚೈತನ್ಯ ಅವರಿಗೆ ಶಹಬ್ಭಾಷ್ ಅನ್ನಲೇಬೇಕು.
ಒಟ್ಟಿನಲ್ಲಿ ಆಪ್ತಮಿತ್ರ ನಂತರ ದ್ವಾರಕೀಶ್ ಅವರ ಬ್ಯಾನರ್ ನಿಂದ ಮತ್ತೊಂದು ಉತ್ತಮ ಚಿತ್ರ ಮೂಡಿಬಂದಿದೆ. ಆಟಗಾರ ಚಿತ್ರಮಂದಿರಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡುವುದು ಗ್ಯಾರಂಟಿ.. ವರಮಹಾಲಕ್ಷ್ಮಿ ಅವರನ್ನು ಮತ್ತೊಮ್ಮೆ ಕೈಹಿಡಿಯುವ ಎಲ್ಲಾ ಲಕ್ಷಣಗಳೂ ತೋರುತ್ತಿದೆ.
ಮಿಸ್ ಮಾಡೀರಾ ಜೋಕೆ.. ನೋಡಲೇಬೇಕಾದ ಆಟಗಾರ..
ರೇಟಿಂಗ್ : ೪/೫  (4/5)
RESPONSIVE LEADERBOARD AD AREA
RESPONSIVE LEADERBOARD AD AREA
To Top